ಮೈರ್ಪಾಡಿ ಸಂಸಾರ-ಸಂಪ್ರದಾಯವೇ ಆಧಾರ
ಬ್ರಾಹ್ಮಣ-ಕೊಟೇಶ್ವರ ಸಮುದಾಯದವರಾದ ನಾವು ಮೊಲತಃ ಕುಂದಾಪುರವಾಸಿಗಳಾಗಿದ್ದು ಮತ್ತೆ ಜೀವನಾಧಾರಕ್ಕಾಗಿ ಮಂಗಳೂರಿನತ್ತ ವಲಸೆ ಬಂದೆವು. ಮೊದಲಿಗೆ ಶೈವ ಸಂಪ್ರದಾಯಿಗಲಾಗಿದ್ದ ನಾವು ಮತ್ತೆ ಶ್ರೀ ವಾದಿರಾಜ ಸ್ವಾಮಿಗಳವರಿಂದ ವೈಷ್ಣವ ಧೀಕ್ಷೆ ಪಡೆದು ಮುಂದುವರೆದೆವು.
ನಮ್ಮ ಹಿರಿಯರು ಜೀವನಕ್ಕಾಗಿ ಕೆಲವರು ಕೇರಳದ ದೇವಾಲಯಗಲಲ್ಲಿ ಶಾಂತಿ (ಸಹಾಯಕರಾಗಿ)ಗಳಾದರೆ ಕೆಲವರು ಶಾಲಾ ಶಿಕ್ಷಕರಾದರು.
ನಮ್ಮ ಪೂರ್ವಜರಿಗೆ ಸುರತ್ಕಲ್ ಸಮೀಪದ ಕುಳಾಯಿ_ಮೈರ್ಪಾಡಿಯ ಸ್ಠಳವು ನಿವಾಸಕ್ಕಾಗಿ ದೊರೆಯಿತು. ಅಲ್ಲಿ ಈಗಲೂ ಮನೆದೇವರಾಗಿ ಶ್ರೀನಿವಾಸ ದೇವರು, ಕುಲದೈವಗಳಾಗಿ ಶ್ರೀ ಮಲ್ಲರಾಯ ಎಂಬ ರಾಜನ್ ದೈವ ಹಾಗೂ ಪರಿವಾರ ದೈವಗಳಾಗಿ ಧೂಮಾವತಿ,ಸತ್ಯದೇವತೆ,ರಕ್ತೇಶ್ವರಿ,ಗುಳಿಗ,ಕಾಡೆತ್ತೆ ದೈವಗಳಿದ್ದರೆ, ನಾಗಬನದಲ್ಲಿ ಅಶ್ವತ್ಥ ಸಹಿತ ನಾಗದೇವರು ನಿತ್ಯ ಪೂಜೆಗೊಳ್ಳುತ್ತಿದ್ದಾರೆ.
ನಾವು ವಿಶ್ವಾಮಿತ್ರ ಗೊತ್ರಜರಾಗಿದ್ದೇವೆ. ಶ್ರೀ ಚಿತ್ರಾಪುರ ದುರ್ಗಾಪರಮೆಶ್ವರಿ ಗ್ರಾಮ ದೇವತೆಯಾಗಿ, ಪಣಂಬೂರು ನಂದನೇಶ್ವರ ಮಾಗಣೆ ದೇವರಾಗಿ ರಕ್ಶಿಸುತ್ತಿದ್ದಾರೆ. ವರ್ಷಾವಧಿ ನಾಗಪಂಚಮಿ ಉತ್ಸವ, ತುಲಸೀ ಪೂಜಾ,ವರ್ದಂತಿ ಉತ್ಸಾವಾದಿಗಳು ಜರಗುತ್ತಿದೆ.
ಕುಲದೈವ ಮಲ್ಲರಾಯ ಹಾಗು ಬನದ ನಾಗ ದೆವರು ಕಾರನಿಕದೆವರುಗಳಾಗಿ ಮೆರೆಯುತ್ತಿದ್ದು ತುಪ್ಪ ದೀಪ ಹಾಗೂ ತಂಬಿಲಸೇವೆಗಳು ಇಷ್ಟದಾಯಕವಾಗಿದೆ.
ಇಲ್ಲಿ ನಾಗಮಂಡಲ ಸೇವೆಯು ಹದಿನೆಂಟು ಏಪ್ರಿಲ್ ೨೦೧೦ ಕ್ಕೆ ಜರಗಲಿದ್ದು ತಮ್ಮ ಆಗಮನವನ್ನು ನಿರೀಕ್ಶಿಸುತ್ತಿದ್ದೇವೆ.
ಇಲ್ಲಿಗೆ ಬರಲು ಹಾದಿ ಮಂಗಳೂರು ಉಡುಪಿ ಹೆದ್ದಾರಿಯ ಸುರತ್ಕಲ್ ಸಮೀಪದ ಕುಳಾಯಿ ಎಂಬಲ್ಲಿ.
ಎನ್ನುತ್ತಾ ......
ನಿಮ್ಮೊಡನೆ
ಪವನ್ ಮೈರ್ಪಾಡಿ
"ಮೈರ್ಪಾಡಿ"-ಪದದೊಂದಿಗೆ '' with the word "Mairpady''
It is the blogsite to establish the traditions and activities performed by mairpady family people. Which is created and posted by Shri Pavan mairpady one of the member of mairpady family and grandson of mairpady anandayya a famous astrologer.
Friday, January 29, 2010
Subscribe to:
Posts (Atom)